ರಂಗೈಯ್ಯನ ಲಡ್ಡೂ ಪರ್ಸಾದ ಪುರಾಣ !!!! ಚಿತ್ರವಿಲ್ಲದ ಈ ಕಥೆ.

28 04 2011

ನಮ್ಮ ಕಚೇರಿಯಲ್ಲಿ ರಂಗಯ್ಯ ಅಂತಾ ಒಬ್ಬ ಗ್ರೂಪ್ ” ಡಿ” ನೌಕರ  ಇದ್ದ.ಗಿಡ್ಡನೆಯ ಇವನು ,ಒಳ್ಳೆಯ ಕೆಲಸ ಗಾರ ಕೆಲವರು ಇವನನ್ನು ಗುಳ್ಳೆ ನರಿ ಅಂತಾ ಕರೀತಿದ್ರು.ಆದರೂ ಇವನು ಒಮ್ಮೊಮ್ಮೆ ಇದ್ದಕ್ಕಿದಂತೆ ಎರಡು ,ಮೂರು ದಿನಗಳು ಪತ್ತೆ ಇರುತ್ತಿರಲಿಲ್ಲ , ನಂತರ ಕಚೇರಿಗೆ ಬಂದು  ” ಹೇ ಹೇ ಹೇ ಸಾ ನಾನು ದೇವಸ್ಥಾನಕ್ಕೆ  ಒಗಿದ್ದೆ ಸಾ” ಅಂತಾ ತಲೆಕೆರೀತಾ ಬಂದು , “ಸಾ ಪರಸಾದ ತಂದೀವ್ನಿ ತಗಳಿ  ಸಾ” ಅಂತಾ , ಎಲ್ಲರಿಗೂ ಪರಸಾದ ಹಂಚೋವ್ನು.ಇಷ್ಟೆಲ್ಲಾ ಇದ್ರೂ ತಾನು ಕಚೇರಿಯಲ್ಲಿ ಡ್ಯೂಟಿಯಲ್ಲಿ ಇದ್ದಾಗ ಬೇಗ   ಕೆಲಸ ಮುಗಿಸೋವ್ನು  . ಹೀಗೆ ಸಾಗಿತ್ತು ಇವನ ಕಾರ್ಯ ವೈಖರಿ.ಒಮ್ಮೆಯಂತೂ   ಒಂದು ವಾರ ಪತ್ತೆ ಇಲ್ಲದೆ ನಂತರ ಆಫಿಸ್ ಗೆ ಬಂದೂ ಸಾ ಮನೆವ್ರಾ ಕೂಡ ತಿರುಪತಿ ಗೆ ಹೋಗಿದ್ದೆ ” ಹಿ ಹಿ ಹಿ ಬೇಜಾರ್ ಮಾಡ್ಕಾ ಬ್ಯಾಡಿ” ಅಂತಾ ಪೂಸಿಹೊಡೆದು  ಗೋಗರೆದು ಆಫಿಸ್ನವ್ರ್ಗೆಲ್ಲಾ  ಲಡ್ಡೂ ಜೊತೆ  ಮೈಸೂರ್ ಪಾಕು ಹಂಚಿದಾ !! ನಾವು ಕೆಲವರು ಅಲ್ಲಾ ರಂಗಯ್ಯ ತಿರುಪತಿಯಲ್ಲಿ ಲಡ್ಡೂ ಜೊತೆ ಮೈಸೂರು ಪಾಕು ಕೊಡೋಕೆ ಯಾವಾಗ ಶುರುಮಾಡಿದರೂ ಅಂತಾ ಹಾಸ್ಯ ಮಾಡಿ ನಕ್ಕೆವು.       ” ಹೇ ಹೇ ಬುಡಿ ಸಾ ತಮಾಸೆ ಮಾಡ್ಬ್ಯಾಡಿ” ಅಂತಾ ಆಚೆ ಹೋದ.ನಂತರ  ಯಥಾ ಸ್ಥಿತಿ . ಹಾಗೆ ಒಮ್ಮೆ ನಾನು ನನ್ನ ಸ್ನೇಹಿತನ ಸಹೋದರಿ  ಮದುವೆ     ಗಾಗಿ ರಜಾ ಹಾಕಿ ತೆರಳಿದ್ದೆ .  ಮದುವೆ ಮನೆಯಲ್ಲಿ ಯಾಂತ್ರಿಕವಾಗಿ  ಉಡುಗೊರೆ  ನೀಡಿ  ಊಟಕ್ಕೆ ಬಂದು ಕುಳಿತೆ , ಅರೆ ಇದೇನಿದು ಅಂತಾ ನೋಡಿದರೆ ನಮ್ಮ ರಂಗಯ್ಯ ನನ್ನ ಮುಂದಿನ ಸಾಲಿನ ತುದಿಯಲ್ಲಿ ಊಟಕ್ಕೆ ಕುಳಿತಿದ್ದ.ಪಕ್ಕದಲ್ಲಿ ಒಂದು ಬ್ಯಾಗು ಬೇರೆ ಇತ್ತು.ಪಾಪ ಇಲ್ಯಾಕೆ ಇವನನ್ನು ಮಾತಾಡಿಸಿ ತೊಂದ್ರೆ  ಕೊಡೋದು ಅಂತಾ ಯೋಚಿಸಿ ಊಟ ಮಾಡಲು ಶುರು ಮಾಡಿದೆ. ಊಟ ಎಲ್ಲಾ ಸಾಂಗವಾಗಿ  ಮುಗಿತೂ . ಕೈತೊಳೆಯುವ ಸರದಿ ಬಂದು ಅಲ್ಲಿ ರಶ್ ಆಗುವ ಮೊದಲು ಕೈ ತೊಳಿಯೋಣ ಅಂತಾ ಬೇಗ ಕೈ ತೊಳೆಯುವ   ಕೆಲಸ ಮುಗಿಸಿದೆ. ಅಲ್ಲೇ ಇದ್ದ ಸ್ನೇಹಿತ ” ಬಾರೋ ಲೋ ಯಾಕೆ ಓಡ್ತಿಯಾ” ಅಂತಾ ತಡೆದು  ಮಾತಾಡ್ತಾ ನಿಲ್ಲಿಸಿಕೊಂಡ . ಊಟ ಮಾಡಿದ ಎಲ್ಲಾ ಜನರು ಊಟ ಮುಗಿಸಿ ತೆರಳಿದ್ದರು ,ಆದ್ರೆ ಒಬ್ಬ ವ್ಯಕ್ತಿ ಮಾತ್ರಾ ಎಲ್ಲಾ ಎಲೆಗಳಲ್ಲಿ ಉಳಿದಿದ್ದ ಲಡ್ಡು  ತೆಗೆದು ತನ್ನಾ ಬ್ಯಾಗಿಗೆ ತುಂಬಿ ಕೊಳ್ಳುತ್ತಿದ್ದಾ!!. ಅರೆ ಇದೇನು ಅಂಥಾ ನೋಡಿದ್ರೆ ಅವನೇ ನಮ್ಮ ಕಚೇರಿ ರಂಗಯ್ಯ !! ಅವನ ಜೊತೆ ಇದ್ದ ಬ್ಯಾಗು ಆಗಲೇ ಹೊಟ್ಟೆ ತುಂಬಾ ಲಡ್ಡು ಗಳನ್ನೂ ತುಂಬಿಕೊಂಡು ಜೋಲಾಡುತಿತ್ತು.           ನಾನು ಅವನಿಗೆ  ತಿಳಿಯದಂತೆ   ನೋಡ್ತಾ ಇದ್ದೆ !! ಎಲಾ ಇವನ ಅಂದು ಕೊಂಡು, ಮನದಲ್ಲಿ ಶಪಿಸುತ್ತಾ ಮನೆಹಾದಿ ಹಿಡಿದೇ.ಮಾರನೆದಿನ ಯಥಾ ಸ್ತಿತಿ “” ಹಿ ಹಿ ಹಿ ಸಾ ನಿನ್ನೆ ಚಾಮುಂಡಿ ಬೆಟ್ಟಕ್ಕೆ  ಹೋಗಿದ್ದೆ ಸಾ!!! ತಕಳಿ ಪರ್ಸಾದ” ಅಂತಾ ಒಳಗೆ ಬಂದಾ .ಬಂದಿತ್ತು ಕೆಟ್ಟ ಸಿಟ್ಟು!!! ಆದರೂ ಇವನಿಗೆ ಬುದ್ದಿ ಕಲಿಸೋಣ ಅಂದು ಕೊಂಡು “ಇರು ರಂಗಯ್ಯ ಎಲ್ಲರ ಜೊತೆ ತಿನ್ನೋಣ!!”  ಅಂದು ಎಲ್ಲರನ್ನೂ ಬರಹೇಳಿ ಒಟ್ಟಿಗೆ ಸೇರಿಸಿದೆ ,”ಈಗ ಬಾ ರಂಗಯ್ಯ ನಿನ್ ಪರ್ಸಾದ ಹಂಚುವಂತೆ ಅಂಥಾ ಅಂದೇ. “ಅವನು ಖುಷಿಯಾಗಿ ಬ್ಯಾಗಿನಿಂದಾ ತೆಗೆದು ಪೇಪರ್ ಮೇಲೆ ಸುರಿದ !!! ಅರೆ ಅದೇ ನಿನ್ನೆ ಮದುವೆ  ಮನೆ ಲಡ್ಡು ಗಳ  ಕರಾಮತ್ತು ಇಲ್ಲಿ ಬಂದಿತ್ತು !! “ಸಾ ಪರ್ಸಾದ ಕೊಡ್ಲಾ “ಅಂದಾ , ” ತಡಿ ರಂಗಯ್ಯ ನಿನ್ ಪರ್ಸಾದದ ಮಹಿಮೆ ಹೇಳ್ತೀನಿ ಆಮೇಲೆ ಕೊಡಿವಂತೆ” ಅಂದು, ಕಚೇರಿ ಸ್ನೇಹಿತರಿಗೆ “ನೋಡ್ರಯ್ಯ ನಮ್ಮ ರಂಗಯ್ಯ ಪಾಪ ಇಷ್ಟು ದಿನಾ ಪುಣ್ಯ ಕ್ಷೇತ್ರ ದರ್ಶಿಸಿ ನಮಗೆ ಪರ್ಸಾದ ಕೊಟ್ಟಿದ್ದಾನೆ. ಇವತ್ತು ಅವನ ಪುಣ್ಯಕ್ಕೆ ನಮ್ಮ ಕಾಣಿಕೆಕೊಡೋಣ” ಎಂದೇ. ಅವನಿಗೆ ಅಚ್ಚರಿಯಾಗಿ “ಹೇ ಹೇ ಹೇ ಯಾನು ಬ್ಯಾಡ ಬುಡಿ ಸಾ ಅಂದಾ !!.” “ಇರು ರಂಗಯ್ಯ ಅಂತಾ ಹೇಳಿ ಅವನು ನಿನ್ನೆ ಮಧುವೆ ಮನೆಯಲ್ಲಿ  ಮಾಡಿದ ಘನ ಕಾರ್ಯದ ವಿವರಣೆಯನ್ನು ಎಲ್ಲರಿಗೂ ದರ್ಶನ ಮಾಡಿಸಿ ರಂಗಯ್ಯನ ಪರ್ಸಾದದ ಮಹಿಮೆ ಸಾರಿದೆ. ಇಷ್ಟುದಿನ ಎಲ್ಲರನ್ನೂ  ಮಂಗಗಳನ್ನಾಗಿ ಮಾಡಿದ್ದ ರಂಗಯ್ಯ  ಇಂದು ತಾನೇ ಮಂಗಯ್ಯ ಆಗಿದ್ದಾ !! ಆಗ ನೋಡಬೇಕಿತ್ತು ಎಲ್ಲರ ಮುಖವನ್ನು !! ಆಹಾ ಪ್ರಸಾದ ಅಂಥಾ ಭಕ್ತಿ ಇಂದ ಕಣ್ಣಿಗೆ ಒತ್ತಿಕೊಂಡು ಸ್ವೀಕರಿಸಿ ದೇವರ ಪ್ರಸಾದವೆಂದು ತಿಳಿದು ಮನೆಗೂ ತೆಗೆದುಕೊಂಡು ಹೋಗಿ  ಧನ್ಯತೆ ಮೆರೆಯುತ್ತಿದ್ದ ಆ  ಮಖಗಳು ಕಿವುಚಿಕೊಂಡು ಅವನಿಗೆ ಶಾಪಾ ಹಾಕಿ ಎರಡೆರಡು ತದುಕಲು ಮುಂದಾಗಿದ್ರೂ . ಅವನಿಗೂ ಈ ಅನಿರೀಕ್ಷಿತ ಬೆಳವಣಿಗೆ ಇಂದಾಗಿ ಸರಿಯಾದ ಮಂಗಳಾರತಿ ಎತ್ತಿಸಿಕೊಳ್ಳುವ ಸರದಿಯಾಗಿತ್ತು. ಇನ್ಮುಂದೆ ಹೀಗೆ ಮಾಡುವುದಿಲ್ಲ ವೆಂದು ಪ್ರಮಾಣ ಮಾಡಿ ಕ್ಷಮೆಕೋರಿದ .ಏನೋ ಹಾಳಾಗ್ಲಿ ಅಂತಾ ಎಲ್ಲರು ತಲಾ ಒಂದೊಂದು ಮಾತಾಡಿ ತಮಗೆ ತಾವೇ ಸಮಾಧಾನ ಪಟ್ಟುಕೊಂಡರು. ಆದರೂ ಈ ಪುಣ್ಯಾತ್ಮಾ ಪ್ರತೀಭಾರಿ ನಮಗೆ ಚಳ್ಳೆ ಹಣ್ಣು ತಿನ್ನಿಸಿ  ಇಂತಹ ಪರ್ಸಾದ ತಿನ್ನಿಸಿ ತನ್ನ ಮಹಿಮೆ ಸಾರಿ ನಮ್ಮನ್ನು ಮೂರ್ಖ ರನ್ನಾಗಿ ಮಾಡಿದ್ದ. ಹಿಂಗಿತ್ತು ನೋಡಿ ನಮ್ಮ ರಂಗಯ್ಯನ ಲಡ್ಡೂ ಪರ್ಸಾದ ಪುರಾಣ.                                                                            

Advertisements
ಅಡಗಿಕೊಂಡು ಕುಳಿತಿರುವ ವಿಸ್ಮಯ!!!! ಈ “ಭೀಮನಖಿಂಡಿ ” ಕಲ್ಲಿನ ಕಮಾನು!!!

26 12 2010
ಭೀಮನ ಖಿಂಡಿ ಬೆಟ್ಟದ ಸುಂದರ ನೋಟ.
ಗೂಗಲ್ ಆರ್ಥ್ ನಲ್ಲಿ ಭೀಮನ ಕಿಂಡಿಯ ಕಲ್ಲಿನ ಕಮಾನು ಕಾಣುವುದು ಹೀಗೆ!!
ಭೀಮನ ಖಿಂಡಿ ಬೆಟ್ಟದ ಪ್ರದೇಶ ದ ವಿವರ !!!
ಭೀಮನ  ಖಿಂಡಿ  ಬೆಟ್ಟದ ಲೋಕೇಶನ್ ಗೂಗಲ್ ಅರ್ಥ್ ನಲ್ಲಿ ಕಂಡಂತೆ.

ಶನಿವಾರ ಗಾಂಧೀ ಜಯಂತಿ ಮನೆಯ ಸನಿಹದಲ್ಲಿ ಗಾಂಧೀಜಿ ಪುತ್ತಳಿಗೆ ಮಾಲಾರ್ಪಣೆ ನಡೆಯುತ್ತಿತ್ತು.ಸಧ್ಯ ಇವತ್ತಾದ್ರೂ ಇವರನ್ನು ನೆನೆಯುತ್ತೆವಲ್ಲಾ ಅನ್ನಿಸಿ ಮನೆಗೆ ಬಂದೆ. ನನ್ನ ತಮ್ಮ ಅಣ್ಣ ರೆಡಿನಾ!!  ಅಂತಾ ಹೇಳಿ ನಮ್ಮ ಮನೆಗೆ ಬಂದೇಬಿಟ್ಟ.ನಾನು ರೆಡಿ ವಿನಯ್ ಅಂದು ಸಿದ್ದನಾದೆ. ಜೊತೆಗೆ ಅವನ ಇಬ್ಬರು ಸ್ನೇಹಿತರು ಗುರು ಹಾಗು ಉತ್ತಮ್  ನಮ್ಮ ಜೊತೆಗೂಡಿದರು .ಗೊತ್ತು ಗುರಿ ಇಲ್ಲದಪ್ರಯಾಣಕ್ಕೆ ಸಿದ್ದರಾದೆವು. ಅಣ್ಣ ಯಾವ್ ಕಡೆ ಅಂತಾ  ವಿನಯ್ ಹೇಳಿದಾಗ  ಸ್ವಲ್ಪ ಕಾರು ನಿಲ್ಸು ಹೇಳ್ತೀನಿ ಅಂತಾ ಹೇಳಿ ಯಾವ ಕಡೆಗೆ ಅಂತಾ ಯೋಚಿಸಿದೆ ,ಆಗ ಜ್ಞಾಪಕಕ್ಕೆ ಬಂದಿದ್ದು ಬಹಳ ಹಿಂದೆ ಹೋಗಿದ್ದ ಈ ” ಭೀಮನ ಖಿಂಡಿ ಬೆಟ್ಟ ” ಸರಿ ಅಲ್ಲಿಗೆ ಹೋಗಲು ತೀರ್ಮಾನಿಸಿ ಮೈಸೂರುನಿಂದ  ಬನ್ನೂರು,ಕಿರುಗಾವಲು,ಮಳವಳ್ಳಿ, ಹಲಗೂರು ಮಾರ್ಗವಾಗಿ ಲಿಂಗ ಪಟ್ಟಣ ಗ್ರಾಮದ ಸಮೀಪದ ಕಂಚನಹಳ್ಳಿ ಗ್ರಾಮ ತಲುಪಿದೆವು.ಈ ಗ್ರಾಮ ಕನಕಪುರ ತಾಲೂಕಿನ ಸಾತನೂರ್ ಹೋಬಳಿ ಗೆ ಸೇರಿದ್ದರೂ ಮಳವಳ್ಳಿ ತಾಲೂಕಿನ ಹಲಗೂರಿಗೆ ಕೇವಲ ಹತ್ತು ಕಿ.ಮಿ.ಇದೆ.ಕಂಚನಹಳ್ಳಿ ಯಲ್ಲಿ ಗ್ರಾಮಸ್ಥರನ್ನು ಭೇಟಿ ಮಾಡಿ ನಾವು ಭೀಮನ ಖಿಂಡಿ ಬೆಟ್ಟ ನೋಡಲು ಬಂದಿರುವುದಾಗಿ ತಿಳಿಸಿದೆವು. ಬಹಳ ಆತ್ಮೀಯವಾಗಿ ಬರಮಾಡಿಕೊಂಡ ಗ್ರಾಮದ ಜನರು ನಮ್ಮ ಕಾರನ್ನು ನಿಲ್ಲಿಸಲು ನೆರಳು ನೀಡಿ ,ಬೆಟ್ಟ ತೋರಿಸಲು ಇಬ್ಬರು ಶಾಲಾ ಬಾಲಕರನ್ನು ಜೊತೆಗೆ ಕಳುಹಿಸಿಕೊಟ್ಟು ತಮ್ಮ ಹಿರಿಮೆ ಸಾರಿದರು.ಗ್ರಾಮದಿಂದ ನಮ್ಮ ನಡಿಗೆ ಬೆಟ್ಟ ದೆಡೆಗೆ  ಸಾಗಿತು. ಗ್ರಾಮದ ದಾರಿಯಲ್ಲಿ ಸಾಗುತ್ತಿದ್ದಾಗ ಅಲ್ಲೇ ಇದ್ದ ಒಂದು ಸಣ್ಣ ಕೆರೆಯ ಸನಿಹ ಗೀಜಗ ಹಕ್ಕಿಗಳ ಗೂಡು ಕಣ್ಣಿಗೆ ಬಿತ್ತು. ಹೆಚ್ಚು ಸಮಯ ವಿಲ್ಲದ ಕಾರಣ ತರಾತುರಿಯಲ್ಲಿ ಗೀಜಗನ ಗೂಡಿನ ಕೆಲವು ಫೋಟೋ ತೆಗೆದೆ!!  ಮುಂದೆ ಜೋಳದಹೊಲ , ತೆಂಗಿನ ತೋಟಗಳ ನಡುವೆ ನಮ್ಮ ಚಾರಣ ಸಾಗಿತು.ಜೊತೆಗೆ ಬಂದಿದ್ದ ಇಬ್ಬರು ಮಕ್ಕಳು ನಮಗೆ ಮಾರ್ಗ ದರ್ಶಕರಾದರು.ಈ ಮಕ್ಕಳು ಬೆಟ್ಟ ಏರ ಬಲ್ಲರೆ ???ಎಂಬ ಅನುಮಾನ ನನ್ನನ್ನು ಕಾಡಿತ್ತು. ನಂತರ ಅವರೇ   ನಾವು    ಬೆಟ್ಟ ಹತ್ತಲು  ಏದುಸಿರು ಬಿಡುವುದನ್ನು ನೋಡಿ ನಕ್ಕರು ಬಿಡಿ !!ಅವರ ಉತ್ಸಾಹ ನಮಗೆ ಸ್ಪೂರ್ತಿಯಾಗಿತ್ತು.ನಡೆ ಮುಂದೆ ನಡೆ ಮುಂದೆ ಅನ್ನುವಂತೆ ನಮ್ಮ ನಡಿಗೆ ಸಾಗಿತು.ಪ್ಯಾಟೆ ಹೈಕಳ ಉತ್ಸಾಹ ಆರಂಭ ದಲ್ಲಿ ವೇಗ ಪಡೆದಿತ್ತು!!!ನಡಿಗೆಯ ಸಮಯದಲ್ಲಿ ಸೂರ್ಯ ತನ್ನ ಪ್ರತಾಪ ತೋರಿಸಲು ಶುರುಮಾಡಿದ. ದೇಹಕ್ಕೋ ಬೆವರಿನ ಸ್ನಾನ ವಾಗಿತ್ತು.ಬಿಸಲಿನ ತಾಪ ನಡಿಗೆಯನ್ನು ನಿಧಾನ ಗೊಳಿಸಲು ಶುರುಮಾಡಿತು, ದೂರದಲ್ಲಿ ಬೆಟ್ಟಗಳು ಸುಂದರವಾಗಿ ಗೋಚರಿಸಿ ಕೈಬೀಸಿ ಕರೆದಿದ್ದವು . ಮೋಹಕ ಬೆಟ್ಟಗಳ ಸನಿಹ ಹೋಗಲು ನಡಿಗೆಯ ವೇಗ ಹೆಚ್ಚಿಸಿದೆವು.ಜೋಳದ ಮದ್ಯದ ದಾರಿಯಲ್ಲದ ದಾರಿಯಲ್ಲಿ ಪ್ರಕೃತಿಯ ಸೊಬಗ ನಡುವೆ ಬಿಸಿಲ ಜಾಲದಲ್ಲಿ ನಮ್ಮ ನದಿಗೆ ಸಾಗಿತ್ತು.ಜೋಳದ ಹೊಲದ ನಡುವೆ ನಡೆಯುವಾಗ ನನ್ನ ಬಾಲ್ಯ ನೆನಪಾಗಿ ಹಳ್ಳಿ ಹುಡುಗನಾಗಿ ಸಂಭ್ರಮಿಸಿದ್ದೆ.ತಮಾಷಿಯಾಗಿ ಮಾತನಾಡುತ್ತಾ ಬೆಟ್ಟದ ತಪ್ಪಲಿಗೆ ತಲುಪಿದ್ದು ತಿಳಿಯಲೇ ಇಲ್ಲ . ಸಾ ನಿಮ್ಮ ಸೂ ,ಚಪ್ಲಿ ಇಲ್ಲೇ ಬಿಡಬೇಕು!! ಅಂತ ನಮ್ಮ ಜೊತೆ ಬಂದಿದ್ದ ಮಕ್ಕಳು ಹೇಳಿದಾಗ  ನಮ್ಮ ಪ್ಯಾಟೆ ಹೈಕಳು ಆಅ!!! ಯಾಕೆ ಅಂದ್ರೂ ಹೌದು ಸಾ ಈ ಬೆಟ್ಟ ಹತ್ತಕ್ಕೆ ಬರಿ ಕಾಲಿನಿಂದ ಮಾತ್ರ ಪ್ರವೇಶ ಅಂದಾಗ ಒಲ್ಲದ ಮನಸಿನಿಂದ ಪಾದ ರಕ್ಷೆಗಳನ್ನು ಒಂದೆಡೆ ಬಿಟ್ಟರು.[ ನನಗೆ ಮೊದಲೇ ಈ ಅನುಭವ ಆಗಿತ್ತು]ಕಲ್ಲು ಮುಳ್ಳಿನ ಹಾದಿಯಲ್ಲಿ ,ಬೆಟ್ಟ ಹತ್ತೋದು ಹೇಗಪ್ಪಾ ಅಂತಾ ಎಲ್ಲರಿಗೂ ಪ್ರಶ್ನೆ ಕಾಡಿತ್ತು.ಬೆಟ್ಟದ ತಪ್ಪಲಿನಲ್ಲಿ ಮೊದಲು ಸಿಕ್ಕಶಿವನ ಪಾದುಕೆಗಳಿಗೆ ನಮಿಸಿ ಅಲ್ಲೇ ಇದ್ದ ಸಣ್ಣ ಗುಡಿಯ ದರ್ಶನ ಪಡೆದು ಸನಿಹದ ಕಟ್ಟೆಯಲ್ಲಿ ಕಲ್ಲುಗಳ ರಾಶಿ ನೋಡಿ ಏನೆಂದು ಕೇಳಿದಾಗ ಬೆಟ್ಟ ಇಳಿದು ವಾಪಸ್ಸು ಬರುವಾಗ ಅಲ್ಲಿ ಮೂರು ಕಲ್ಲುಗಳನ್ನು ಪ್ರತಿಯೊಬ್ಬರೂ ಹಾಕಬೇಕೆಂದು ಮಕ್ಕಳು ಹೇಳಿದರು. ಯಾಕೆ ಎಂದು ಮಕ್ಕಳುಹೇಳಲಿಲ್ಲ ನಾವೂ ಕೇಳಲಿಲ್ಲ.[ಅಲ್ಲಿನ ಆಚರಣೆ ಹಾಗೆ ಇರಲಿ ಬಿಡಿ ] ಮುಂದೆ ಶುರುವಾಯಿತು ಬೆಟ್ಟ ಹತ್ತುವ ಪರ್ವ.ಆಳೆತ್ತರ ಬೆಳೆದ ಹುಲ್ಲು ಅಲ್ಲಲ್ಲಿ ಸಿಗುವ ಬಂಡೆ ಕಲ್ಲುಗಳು, ಕರಡಿ ಗುಹೆಗಳು ಇವುಗಳ ನಡುವೆ ನಮ್ಮ ಬೆಟ್ಟ ಹತ್ತುವ ಕಾಯಕ !!ಸುಂದರ ಹಸಿರ ಮಡಿಲಲ್ಲಿ ಅಲ್ಲಲ್ಲಿ ಸಿಗುವ ಸುಂದರ ಹೂ ಗಳ             ನೋಟ ಮೋಹಕವಾಗಿತ್ತು.ಏದುಸಿರು ಬಿಡುತ್ತ ಸಾಗುವ ನಾವು ಅಲ್ಲಲ್ಲಿ ಸಿಗುವ ಬಂಡೆಗಳ ನೆರಳಲ್ಲಿ ವಿಶ್ರಾಂತಿಪಡೆದು ಸಾಗಿದ್ದೆವು.ಧಣಿದ ದೇಹಕ್ಕೆ ಬಂಡೆಗಳ ನೆರಳು ಆಸರೆ ನೀಡಿತ್ತು.ಅಂತೂ ಇಂತೂ ಬೆಟ್ಟ ಹತ್ತಿದ  ನಾವು ಭೀಮನ ಕಿಂಡಿ  ಪ್ರವೇಶ ಮಾಡಿದೆವು.ನಮ್ಮ ಹೈಕಳಂತೂ ಅಲ್ಲಿನ ದೃಶ್ಯ ನೋಡಿ ಪುಳಕಿತರಾಗಿ ಕುಣಿದು ಕುಪ್ಪಳಿಸಿದರು.ಅದ್ಭುತ ವಾತಾವರಣ  ತಣ್ಣನೆಯ ಗಾಳಿ ನಮ್ಮ ಧಣಿವನ್ನು ಮಾಯ  ಮಾಡಿತ್ತು.ಅಲ್ಲಿನ  ದೃಶ್ಯ  ಮನ ಮೋಹಕವಾಗಿ ಬೆಟ್ಟ ಹತ್ತಿದ್ದಕ್ಕೂ ಸಾರ್ಥಕ ಅನ್ನಿಸಿತು.ಸುಂದರ ಬೃಹದಕಾರವಾದ ಕಲ್ಲಿನ ಕಮಾನು ಅಚ್ಚರಿ ಹುಟ್ಟಿಸಿತ್ತು.ಮನದಣಿಯ ಅದರ ರಚನೆ ನೋಡಿ ಅಚ್ಚರಿ ಪಟ್ಟೆವು ಬನ್ನಿ ನೀವೂ ನೋಡಿ      ಆಳೆತ್ತರದ ಬೃಹತ್ ಕಮಾನು ಸಣ್ಣ ದೇವಾಲಯ ಸುಂದರ ಪ್ರಶಾಂತ ಜಾಗ ಸ್ವರ್ಗ ಇಲ್ಲೇ ಇದೆ ಅನ್ನಿಸಿತ್ತು.     ವಾವ್ ಎಂಥಹ ಸುಂದರ ಲೋಕ ಆಲ್ವಾ !! ಬಹಳ ಹೊತ್ತು ಅಲ್ಲಿದ್ದ ನಗಾರಿ ಭಾರಿಸಿಕೊಂಡು ಹಾಡಿ  ಕುಣಿದು ತಂದಿದ್ದ ತಿಂಡಿ ತಿನಿಸು ಖಾಲಿ ಮಾಡಿ ಬೆಟ್ಟ ಇಳಿದೆವು ಆದರೂ ಈ ಕಲ್ಲಿನ ಕಮಾನು ಪೂರ್ತಿ ಯಾಗಿ ಫೋಟೋ ತೆಗೆಯುವ ಬಯಕೆ ಯಾಗಿ ಲೆಕ್ಕಾಚಾರ ಹಾಕಲಾರಂಭಿಸಿದ್ದೆ. ಗ್ರಾಮಕ್ಕೆ ವಾಪಸ್ಸು ಬಂದ ನಾವು ಸಹಕಾರ ನೀಡಿದ ಮಕ್ಕಳಿಗೆ ಹಾಗು ಗ್ರಾಮಸ್ಥರಿಗೆ ಕೃತಜ್ಞತೆ ಅರ್ಪಿಸಿ ಅಲ್ಲಿಂದ ಹೊರಟೆವು.ಮುಖ್ಯ  ರಸ್ತೆಗೆ ಬಂದ ನನಗೆ ಪಕ್ಕದ ಬೆನುಮನ ಹಳ್ಳಿ  ಗ್ರಾಮದಿಂದ ಈ ಕಲ್ಲಿನ ಕಮಾನಿನ ಪೂರಣ ಫೋಟೋ ತೆಗೆಯಬಹುದು ಅನ್ನಿಸಿ ನಮ್ಮ ಹುಡುಗರಿಗೆ ತಿಳಿಸಿದೆ. ಪಾಪ ಮೊದಲೇ ಧಣಿವು ಹಸಿವಿನಿಂದ ಕಂಗಾಲಾಗಿದ್ದ ಅವರು ಒಲ್ಲದ ಮನಸ್ಸಿನಿಂದ ನನ್ನ ಜೊತೆ ಬಂದರು.ಪಕ್ಕದ ಬೆನುಮನ ಹಳ್ಳಿ ಗ್ರಾಮ   ಪ್ರವೇಶಿಸಿ ಸುಮಾರು ಮೂರು ಕಿ.ಮಿ.ಕ್ರಮಿಸಿದ ನಮಗೆ ಸಿಕ್ಕ ದೃಶ್ಯ ಅಮೋಘ ವಾಗಿತ್ತು ಇಡೀ ಬೆಟ್ಟ ವಿವಿಧ ಆಕಾರದಲ್ಲಿ ಗೋಚರಿಸಲು ಸಿಕ್ಕಿತ್ತು. ಒಂದು ಹೆಬ್ಬುಲಿ ಬಾಯ್ತೆರೆದು ಏನನ್ನೋ ತಿನ್ನುತ್ತಿರುವಂತೆ ಕಂಡ ಈ ದೃಶ್ಯ ಮರೆಯಲಾಗದೆ ಉಳಿಯಿತು ಈ ಬೆಟ್ಟದ ಮಹಿಮೆಯೇ ಹೀಗೆ ಹಿಂದೊಮ್ಮೆ ಇಲ್ಲಿಗೆ ಬಂದಿದ್ದಾಗ ನನಗೆ ಸಿಕ್ಕ ದೃಶ್ಯ ಮರೆಯಲಾಗದ್ದು ಬನ್ನಿ ನೋಡೋಣ ಒಬ್ಬ ಹುಡುಗಿ ತನ್ನ ಪುರುಷನ ಹೆಗಲಮೇಲೆ ತನ್ನ ಕುತ್ತಿಗೆ ಇಟ್ಟಿರುವಂತೆ ಕಾಣುವ ಈ ವಿಚಿತ್ರ ಎಲ್ಲಿ ಸಿಕ್ಕೀತು ??? ಮತ್ತೊಂದು ವಿಶೇಷ ಇಲ್ಲಿಯವರೆಗೂ ಯಾವುದೇ ವೃತ್ತ ಪತ್ರಿಕೆಯಲ್ಲಿ, ವಾರ ,ಮಾಸಿಕ ಪತ್ರಿಕೆ ಗಳಲ್ಲಿ  ಟಿ.ವಿ.ಯಲ್ಲಿ ಈ ಭೀಮನ ಖಿಂಡಿ ಬೆಟ್ಟದ ಬಗ್ಗೆ  ಯಾವುದೇ ಮಾಹಿತಿ ಬಂದಿಲ್ಲ !!! ವರ್ಷಕ್ಕೊಮ್ಮೆ ಮೈಸೂರಿನಿಂದ ಯೂತ್ ಹಾಸ್ಟೆಲ್ ನಿಂದ ಚಾರಣ ಹೊರಟರೂ ಈ ಬೆಟ್ಟದ ಪೂರ್ಣ ಚಿತ್ರ ಎಲ್ಲೂ ಪ್ರಕಟವಾಗಿಲ್ಲ .ಅಂತರ್ಜಾಲದಲ್ಲೂ ಇದರಬಗ್ಗೆ ವಿಕಿ ಪೀಡಿಯ ಸೇರಿದಂತೆ ಮಾಹಿತಿ ಇಲ್ಲ. ಪ್ರವಾಸಿಗಳಿಗೆ ಮಾಹಿತಿಯೇ ಇಲ್ಲ !! ಈ ಭೀಮನ ಖಿಂಡಿ ಬೆಟ್ಟದ ಬಗ್ಗೆ ಮೊದಲ ಮಾಹಿತಿ ಎಲ್ಲರಿಗೂ ನೀಡುತ್ತಿರುವ ಬಗ್ಗೆ ನನಗಂತೂ ಹೆಮ್ಮೆ ಇದೆ .ಬಿಡುವಾದಾಗ ನೀವು ಒಮ್ಮೆ ಹೋಗಿ ಬನ್ನಿ. [ ಬೆಂಗಳೂರಿನಿಂದ ಹೋಗ ಬೇಕಾದವರು  ಬೆಂಗಳೂರು-ಕನಕಪುರ – ಸಾತನೂರು -ಹಲಗೂರು-[ಹಲಗೂರಿನಿಂದ ಚೆನ್ನಪಟ್ಟಣ ರಸ್ತೆ ಮೂಲಕ ] ಲಿಂಗ ಪಟ್ಟಣ -ಕಂಚನ ಹಳ್ಳಿ  ಅಡ್ಡ ರಸ್ತೆ -ಕಂಚನ ಹಳ್ಳಿ ]. ಎಚ್ಚರ ಆದರೆ ಈ ಬೆಟ್ಟವನ್ನು ಬರಿ ಕಾಲಿನಿಂದ ಮಾತ್ರ ಇರಬೇಕು !!! ಒಂದು ದಿನದ ಚಾರಣಕ್ಕೆ ಹೇಳಿ ಮಾಡಿಸಿದ ಪ್ರದೇಶ .ಬನ್ನಿ ನೋಡಿ ಆನಂದ ಪಡಿ !!! ನಮಸ್ಕಾರ.ಹೆಚ್ಚಿನ ಮಾಹಿತಿಗಾಗಿ ಗೂಗಲ್  ಅರ್ಥ್ ನಲ್ಲಿ ಭೀಮನ ಖಿಂಡಿ ಜಾಗ ಗುರುತಿಸಿದ್ದು  ಅದರ ಫೋಟೋ ಕೂಡ ನೀಡಿದ್ದೇನೆ.     ಗೂಗಲ್  ಅರ್ಥ್ ನಲ್ಲಿಯೂ ಈ ಬಗ್ಗೆ ಮಾಹಿತಿ ಈಗ  ಲಭ್ಯ ವಾಗಿದೆ.ನೀವು ಒಮ್ಮೆ ಹೋಗಿ ಬನ್ನಿ . ಅಡಗಿಕೊಂಡು ಕುಳಿತಿರುವ ವಿಸ್ಮಯ  ಭೀಮನ ಖಿಂಡಿ ವಿಚಾರ ಪ್ರಪಂಚಕ್ಕೆ ತಿಳಿಯಲಿ.

ಆಸ್ಟೇಲಿಯಾ ಖಂಡದ ಸಮೀಪ ಶ್ರೀರಂಗಪಟ್ಟಣ[seringapattam ] ದ್ವೀಪ !!!

29 08 2010

ನಮಸ್ಕಾರ ಬನ್ನಿ ಈ ಸಂಚಿಕೆಯಲ್ಲಿ ನಿಮಗೆ ಒಂದು ಆಶ್ಚರ್ಯಕರ ವಿಚಾರ ತಿಳಿಸಿಕೊಡುತ್ತೇನೆ. ನಮಗೆಲ್ಲಾ ಗೊತ್ತು  ಕರ್ನಾಟಕದ ಮಂಡ್ಯ ಜಿಲ್ಲೆಯ ಒಂದು ಸಣ್ಣ ತಾಲೂಕು ಶ್ರೀರಂಗಪಟ್ಟಣ ಇತಿಹಾಸ ಪ್ರಸಿದ್ದ ಅಂತ.ಈ ಊರನ್ನು ಹಿಂದೆ ಆಂಗ್ಲರು serigapattam  ಅಂತಾನು ಕರೀತಿದ್ರು.ಈಗ ನೋಡಿ ಆಸ್ಟ್ರೇಲಿಯ ದೇಶದ ಪಶ್ಚಿಮ ದಿಕ್ಕಿಗೆ ಸಮೀಪ ಒಂದು ಕೊರಾಲ್ ದ್ವೀಪಕ್ಕೆ seringapattam ಅಂತಾ ಹೆಸರಿಟ್ಟು ಕನ್ನಡ ನಾಡಿನ ಈ ಊರಿನ ಹೆಸರು ಮೆರೆಯುವಂತೆ ಮಾಡಲಾಗಿದೆ. ಅಂತರ್ಜಾಲ ಜಾಲಾಡಿದಾಗ ಈ ಹಿಂದೆ  ಟಿಪ್ಪೂ ಸುಲ್ತಾನ್ ಕಾಲದಲ್ಲಿ ನಡೆದ ಮೈಸೂರಿನ ಅಂತಿಮ ಯುದ್ದ [೧೭೯೯] ದಲ್ಲಿ ಭಾಗವಹಿಸಿ ನಂತರ ಆಸ್ತ್ರೆಲಿಯಗೆ ತೆರಳಿದ ಸ್ಕಾಟ್ ಕುಟುಂಬ ಒಂದು ಈ ದ್ವೀಪವನ್ನು ಖರೀದಿಸಿಶ್ರೀ  ರಂಗ ಪಟ್ಟಣದಲ್ಲಿ ನಡೆದ ಅಂತಿಮ ಕಾಳಗದ ನೆನಪಾಗಿ ಆ ದ್ವೀಪಕ್ಕೆ seringapattam  ಅಂತಾ ಹೆಸರನ್ನು ನಾಮಕರಣ ಮಾಡಿ,ಸಂಭ್ರಮಿಸಿದೆ.ಬಹುಷಃ ಈ ದೇಶದ ಯಾವುದೇ ಊರಿನ /ಪಟ್ಟಣದ ಬಗ್ಗೆ ಇಂಥಹ ಘಟನೆ ಇರುವುದಿಲ್ಲ .ಬನ್ನಿ ಇದರ ಬಗ್ಗೆ ಕೆಲವು ಚಿತ್ರಗಳನ್ನು ಅಂತರ್ಜಾಲ  ಕೃಪೆ  ಇಂದ  ನಿಮಗಾಗಿ ಕೆಲವು ಚಿತ್ರಗಳನ್ನು ಡೌನ್ ಲೋಡ್ ಮಾಡಿದ್ದೇನೆ ನೋಡಿಬಿಡೋಣ ಬನ್ನಿ Seringapatam Reef is located at 13°40′S 122°05′E / 13.667°S 122.083°E / -13.667; 122.083, 23 km north of Scott Reef North. This reef is named after the Battle of Seringapatam, the historical last and decisive battle fought between Tipu Sultan and the British Raj forces in Southern India. It is a small circular-shaped reef. Its narrow reef rim encloses a relatively deep lagoon. Much of the reef becomes exposed at low tide. There are large boulders around its edges, with a few sandbanks, which rise about 1.8 m above the water, on the west side. Seringapatam Reef covers an area of 55 km² (including the central lagoon). ನೀವು ಈ ತಾಣಕ್ಕೆ ಹೋಗಿ ಕನ್ನಡ ನಾಡಿನ ಹೆಮ್ಮೆಯ ದ್ವೀಪ ಒಂದರ ಹೆಸರನ್ನು ದೂರದ ಆಸ್ಟ್ರೇಲಿಯ ಸಮೀಪ ಇಡಲಾಗಿರುವ ಸೋಜಿಗವನ್ನು ಅನುಭವಿಸಿ.ಬನ್ನಿ ಹೇಳೋಣ ನಮ್ಮ ದೇಶದ ಇತಿಹಾಸಕ್ಕೆ ಜಯವಾಗಲಿ. ನೋಡಿದ್ರಾ ನಮ್ಮ ದೇಶದ ಇತಿಹಾಸ ಎಂಥಹ ವಿಶೇಷ ಹೊಂದಿದೆ.ಆಲ್ವಾ ನೀವೇನಂತೀರಾ!!!

ಪ್ರಶಸ್ತಿ ಪಡೆದ ಒಂದು ಚಿತ್ರ ಅದನ್ನು ತೆಗೆದ ಛಾಯಾಚಿತ್ರಗಾರನ ಆತ್ಮಹತ್ಯೆಗೆ ಕಾರಣ ವಾಯಿತು!!!

27 06 2010

ಈ ಚಿತ್ರದಲ್ಲಿರುವವನು ಕೆವಿನ್ ಕಾರ್ಟರ್ , ವಿಶ್ವ ಕಂಡ ಒಬ್ಬ ಅಪರೂಪದ ಛಾಯಾಚಿತ್ರಗಾರ. ದಕ್ಷಿಣ ಆಫ್ರಿಕಾದವನಾದ ಇವನು ತನ್ನ ಅದ್ಭುತ ಛಾಯಾಚಿತ್ರಗಳಿಂದ ಜಗತ್ತಿನ ಅನೇಕ ಘಟನೆಗಳಿಗೆ ಸಾಕ್ಷಿಯಾಗಿದ್ದಾನೆ.ಇವನು 1994 ರ ಸುಡಾನ್ ದೇಶದ ಭೀಕರ ಬರಗಾಲದ ಬಗ್ಗೆ ಜಗತ್ತಿಗೆ ಕಣ್ಣಿಗೆ ಕಟ್ಟಿದಂತೆ ತನ್ನ ಛಾಯಾ ಚಿತ್ರಗಳಿಂದ ವಿಷಯ ಮುಟ್ಟಿಸಿದ. ಈ ಕೆಳಗಿನ ಒಂದು ಚಿತ್ರ ಇವನ ಜೀವನದ ಒಂದು ದುರಂತ ತಂದುಬಿಟ್ಟಿತು.ಬರಗಾಲದ ಭೀಕರ  ಅನುಭವದಲ್ಲಿನ ಈ ಚಿತ್ರ ಹೇಳುವ ಕಥೆ ಓದಿ, ನಿತ್ರಾಣಗೊಂಡ  ಈ ಮಗು ವಿಶ್ವಸಂಸ್ಥೆ ಸ್ತಾಪಿಸಿದ್ದ ಆಹಾರ ಕೇಂದ್ರಕ್ಕೆ ತೆವಳುತ್ತಾ ಸಾಗಿದೆ  ಈ ಮಗು ಸತ್ತರೆ ತನಗೆ ಆಹಾರ ಸಿಗುತ್ತದೆಂಬ ಆಸೆ ಯಿಂದ ರಣಹದ್ದು  ಮಗುವಿನ ಸಾವನ್ನು ಬಯಸಿ ಕಾಡು ಕುಳಿತಿದೆ. ಈ ಚಿತ್ರವನ್ನು ಕೇವಲ ಹತ್ತು ಮೀಟರ್ ಹತ್ತಿರದಿಂದ ಚ್ತ್ರಿಸಿದ ಕೆವಿನ್ ಕಾರ್ಟರ್ ಜಗತ್ತಿಗೆ ಬರದ ದೇಶ ದ ಸ್ಥಿತಿಯನ್ನು ಜಗತ್ತಿಗೆ ತೋರಿದ್ದ !!.ಈ ಚಿತ್ರ ಕ್ಕೆ ವಿಶ್ವ ವಿಖ್ಯಾತ   ಪುಲಿಟ್ಜರ್ ಪ್ರಶಸ್ತಿ ಬಂದಿತು, ಆದರೆ ಈ ಚಿತ್ರದಲ್ಲಿನ ದುರಂತವನ್ನು ಕಣ್ಣಾರೆ ಸಾಕ್ಷೀ ಕರಿಸಿದ್ದ  ಕೆವಿನ್ ಕಾರ್ಟರ್ ಜೀವನದಲ್ಲಿ ಜಿಗುಪ್ಸೆಗೊಂಡು  ಆತ್ಮಹತ್ಯೆ  ಮಾಡಿಕೊಂಡ . ಆಲ್ಲಿಗೆ ಒಬ್ಬ ಜಗತ್ತಿನ ಅದ್ಭುತ ಛಾಯಾಚಿತ್ರಗಾರನ ಜೀವನ ಅಂತ್ಯವಾಗಿ ಹೋಯ್ತು.ನಮ್ಮ ದೇಶದಲ್ಲಿ ತಿನ್ನುವ ಅನ್ನಕ್ಕೆ, ನೀರಿಗೆ ಬರವಿಲ್ಲದಿದ್ದರೂ  ನಾವು ಇದರ ಬೆಲೆ ತಿಳಿಯದೆ  ಮಾಡುವೆ, ಸಮಾವೇಶ, ಸಮಾರಂಭ ,ಹಬ್ಬ ,ಸಾರ್ವಜನಿಕ ಆಚರಣೆಗಳಲ್ಲಿ  ಪ್ರತಿಷ್ಠೆಗಾಗಿ  ಆಹಾರ , ನೀರು ಪೋಲುಮಾಡಿ ನಲಿದಾಡುತ್ತೇವೆ . ಇದರಿಂದಾದರೂ ಬುದ್ದಿಕಲಿತು  ಬದುಕಲು ತಿಂದು ಸಾರ್ಥಕವಾಗಿ ಬದುಕೋಣ .ಏನಂತಿರಾ?????

Hello world!

27 06 2010

Welcome to WordPress.com. This is your first post. Edit or delete it and start blogging!